ಆಹಾರ ಸುರಕ್ಷತೆಯಲ್ಲಿ ಅಸಡ್ಡೆ ಬೇಡ; ಡಾ.ತಿಪ್ಪೇಸ್ವಾಮಿ ಕೆ.ಟಿ.
ಉಗ್ರಾಣದಲ್ಲಿರುವ ಎಲ್ಲಾ ಚೀಲ ಧಾನ್ಯವೂ ಒಂದು ಮಗುವಿನ ಆರೋಗ್ಯ, ಶಿಕ್ಷಣ ಮತ್ತು ಭವಿಷ್ಯಕ್ಕೆ ನೇರವಾಗಿ ಸಂಬಂಧಿಸಿದೆ. ಯಾವುದೇ ಆಹಾರ ಸುರಕ್ಷತೆಯಲ್ಲಿ ಅಸಡ್ಡೆ ಮಾಡದೆ ಸಂವೇದನಾಶೀಲತೆಯಿಂದ ಎಲ್ಲ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ನಿಯಮಿತ ಮೇಲ್ವಿಚಾರಣೆ ಮತ್ತು ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಮಕ್ಕಳ ಪೋಷಣಾ ಹಕ್ಕುಗಳನ್ನು ರಕ್ಷಿಸಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಅಭಿಪ್ರಾಯಪಟ್ಟರು. ಅವರು ತುಮಕೂರು ನಗರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವ್ಯಾಪ್ತಿಯ ಉಗ್ರಾಣಗಳಿಗೆ ಬೇಟಿ ನೀಡಿ ಆಹಾರ ಸಂರಕ್ಷಣೆ, ಗುಣಮಟ್ಟ ಹಾಗೂ ವಿತರಣಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ಪರಿಶೀಲನೆಯ ಮುಖ್ಯ ಉದ್ದೇಶ ಮಕ್ಕಳಿಗೆ ಸುರಕ್ಷಿತ ಮತ್ತು ಪೌಷ್ಟಿಕ ಆಹಾರ ದೊರಕುವಂತೆ ವ್ಯವಸ್ಥೆಗಳನ್ನು ಬಲಪಡಿಸುತ್ತದೆ. ಬೇಟಿಯ ಸಂದರ್ಭದಲ್ಲಿ ಉಗ್ರಾಣಗಳ ಪ್ರಮಾಣ, ಧಾನ್ಯಗಳ ಸಂಗ್ರಹ ವಿಧಾನ, ಕೀಟ–ಇಲಿ ನಿಯಂತ್ರಣ ವ್ಯವಸ್ಥೆ, FIFO (ಮೊದಲು ಬಂದ ಧಾನ್ಯಗಳ ಮೊದಲು ವಿತರಣೆ) ಪಾಲನೆ, ಸ್ಟಾಕ್ ದಾಖಲೆಗಳು ಮತ್ತು ಶಾಲೆ ಮತ್ತು ವಸತಿ ನಿಲಯಗಳಿಗೆ ಹೋಗುವ ಆಹಾರದ ಗುಣಮಟ್ಟವನ್ನು ಗಮನಿಸಲಾಗಿದೆ. ಮಕ್ಕಳಿಗೆ ಹೋಗುವ "ಸೂಕ್ಷ್ಮ ವರ್ಗ" ಎಂದು ಪರಿಗಣಿಸಿ, ಅದರಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಗುಣಮಟ್ಟದ ಸಂಧಾನ ನಡೆಯಬಾರದು ಸ್ಪಷ್ಟ ಸೂಚನೆ ನೀಡಲಾಗಿದೆ. ಭಾರತೀಯ ಆಹಾರ ಸುರಕ್ಷತೆ ...