ದೇವದಾಸಿಯರ ಮಕ್ಕಳ ಮೇಲಿನ ತಾರತಮ್ಯ ಅಕ್ಷಮ್ಯ; ಡಾ.ತಿಪ್ಪೇಸ್ವಾಮಿ ಕೆ.ಟಿ.
ಬೆಂಗಳೂರು: ಮಾಜಿ ದೇವದಾಸಿಯರ ಮಕ್ಕಳು ವಿವಿಧ ರೀತಿಯ ಶೋಷಣೆ, ತಾರತಮ್ಯ ಹಾಗೂ ಸಂಕಷ್ಟಗಳಿಗೆ ಒಳಗಾಗುತ್ತಿದ್ದಾರೆ. ನಾಗರಿಕ ಸಮಾಜವೊಂದರಲ್ಲಿ ಇದಕ್ಕೆ ಅವಕಾಶವಿರಬಾರದು, ಇಂತಹ ಮಕ್ಕಳ ವಿಕಾಸಕ್ಕಾಗಿ ಸರ್ಕಾರ ಮತ್ತು ಸಮಾಜ ಕ್ಷಿಪ್ರಗತಿಯಲ್ಲಿ ಕೆಲಸಮಾಡಬೇಕಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಅಭಿಪ್ರಾಯಪಟ್ಟರು. ನಿನ್ನೆ ಬೆಂಗಳೂರಿನಲ್ಲಿ ನಡೆದ "ಮಾಜಿ ದೇವದಾಸಿ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಮಾಜಿ ದೇವದಾಸಿ ಮಹಿಳೆಯರ ಜಾಲಗಳೊಂದಿಗೆ ರಾಜ್ಯ ಮಟ್ಟದ ಸಮಾಲೋಚನಾ ಸಭೆ" ಯಲ್ಲಿ ಆಯೋಗದ ಮಾನ್ಯ ಸದಸ್ಯರಾದ ಡಾ.ತಿಪ್ಪೇಸ್ವಾಮಿ ಕೆ.ಟಿ. ರವರು ಭಾಗವಹಿಸಿ ದೇವದಾಸಿ ಮಕ್ಕಳ ಸಮಸ್ಯೆಗಳ ಕುರಿತು ತಾಯಂದಿರ ಅಹವಾಲುಗಳನ್ನು ಆಲಿಸಿದರು. ಸದರಿ ಕಾರ್ಯಾಗಾರವನ್ನು ಚಿಲ್ಡ್ರೆನ್ ಆಫ್ ಇಂಡಿಯಾ ಹಾಗೂ ಇನ್ನಿತರೇ ಸಹಭಾಗಿ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸದರಿ ಸಭೆಗೆ ಕರ್ನಾಟಕದ ೧೧ ಜಿಲ್ಲೆಗಳಿಂದ ಮಾಜಿ ದೇವದಾಸಿಯರು ಆಗಮಿಸಿ ತಮ್ಮ ಸಮಸ್ಯೆ ಹಾಗೂ ಸವಾಲುಗಳನ್ನು ಹಂಚಿಕೊಂಡರು ಮತ್ತು ಪರಿಹಾರದ ದಾರಿಗಳನ್ನು ವಕಾಲತ್ತು ತಂತ್ರದ ಮೂಲಕ ಪ್ರಯತ್ನಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಶಾಲೆ ಹಾಗೂ ಇನ್ನಿತರೇ ಶೈಕ್ಷಣಿಕ ಸಂಸ್ಥೆಗಳಲ್ಲಿ ದೇವದಾಸಿ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ, ತಾರತಮ್ಯವನ್ನು ತೊಡೆದುಹಾಕುವುದು, ವಸತಿ ನಿಲಯಗಳ...