ಮಕ್ಕಳ ಹಕ್ಕುಗಳ ಸಾಕಾರಕ್ಕೆ ಬೇಕಿದೆ; ಗ್ರಾಮಾಡಳಿತದ ಸ್ಪಂದನೆ.
ಕರ್ನಾಟಕ ಸರ್ಕಾರವು ಗ್ರಾಮ ಪಂಚಾಯತ್‌ಗಳನ್ನು ಮಕ್ಕಳ ಸ್ನೇಹಿಯನ್ನಾಗಿ ರೂಪಿಸಲು ಹಾಗೂ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಹಲವಾರು ದೂರದೃಷ್ಟಿಯ ಕಾರ್ಯಕ್ರಮಗಳನ್ನು ಪರಿಚಯಿಸಿದೆ. ಆ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳ ಹಕ್ಕುಗಳು ಮತ್ತು ಅವರ ವಿಕಾಸವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ರೂಪಿಸಲಾದ ಇಂತಹ ಮುಖ್ಯ ಉಪಕ್ರಮಗಳಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಯ ಸ್ಥಾಪನೆ, ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳ ಆಯೋಜನೆ, ಪಂಚಾಯ್ತಿ ಮಟ್ಟದ ಮಕ್ಕಳ ಅಂಕಿಅAಶಗಳ ಸಂಗ್ರಹ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವ ಪ್ರಯತ್ನಗಳು, ಗ್ರಾಮೀಣ ಗ್ರಂಥಾಲಯಗಳ ಸಬಲೀಕರಣ ಮತ್ತು ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಸೇರಿವೆ. ಇಂತಹ ಮಹತ್ವದ ಸದುದ್ದೇಶವುಳ್ಳ ಕಾರ್ಯಕ್ರಮಗಳು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಮತ್ತು ಯಶಸ್ವಿಯಾಗಿ ಕಾರ್ಯಗತಗೊಳಿಸಿದರೆ, ಕರ್ನಾಟಕವು ಇಡೀ ದೇಶಕ್ಕೆ ಮಾದರಿಯಾಗಿ ನಿಲ್ಲಬಹುದಾಗಿದೆ. ಈ ಹಿನ್ನೆಲೆಯಲ್ಲಿ ಪಂಚಾಯ್ತಿ ಮಟ್ಟದ ಮಕ್ಕಳ ಹಕ್ಕುಗಳ ರಕ್ಷಣಾ ವ್ಯವಸ್ಥೆಗಳ ಸಂಕ್ಷಿಪ್ತ ಪರಿಚಯ ಈ ಲೇಖನದಲ್ಲಿದೆ.
ಮಹಿಳಾ ಮತ್ತು
ಮಕ್ಕಳ ರಕ್ಷಣಾ ಕಾವಲು ಸಮಿತಿ
ಮಹಿಳಾ ಮತ್ತು
ಮಕ್ಕಳ ರಕ್ಷಣಾ ಕಾವಲು ಸಮಿತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ
ಮತ್ತು ವಿಕಾಸಕ್ಕೆ ಸಂಬAಧಿಸಿದ ಸಮಸ್ಯೆಗಳನ್ನು
ಪರಿಹರಿಸಲು ಮತ್ತು ತಗ್ಗಿಸಲು ವಿನ್ಯಾಸಗೊಳಿಸಲಾಗಿದೆ. ಮಹಿಳೆ ಮತ್ತು ಮಕ್ಕಳ ಕೇಂದ್ರಿತವಾಗಿ ಈ
ಹಿಂದೆ ಅಸ್ಥಿತ್ವದಲ್ಲಿದ್ದ ಅನೇಕ ಸಮಿತಿಗಳನ್ನು ವಿಲೀನಗೊಳಿಸಿ ೨೦೧೯ರಿಂದ ಇದೊಂದೇ ಸಮಿತಿಯನ್ನು
ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸರ್ಕಾರ ಆದೇಶಿಸಿದೆ.
ಮಕ್ಕಳ
ನಿಂದನೆ,
ನಿರ್ಲಕ್ಷ್ಯ ಮತ್ತು ಶೋಷಣೆಯ ಪ್ರಕರಣಗಳ ಮೇಲ್ವಿಚಾರಣೆ ಮತ್ತು ವರದಿ ಮಾಡುವಲ್ಲಿ ಈ ಸಮಿತಿಯು
ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸಮುದಾಯದ ಮೇಲೆ ಎಚ್ಚರಿಕೆಯ ಕಣ್ಣಿಡುವ ಮೂಲಕ ಮಕ್ಕಳಿಗೆ ಸುರಕ್ಷಿತ ಮತ್ತು ಪೋಷಣೆಯ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.
ಆದಾಗ್ಯೂ,
ಇಂತಹ ಸಮಿತಿಗಳು ಇನ್ನೂ ಎಷ್ಟೋ ಗ್ರಾಮ ಪಂಚಾಯ್ತಿಗಳಲ್ಲಿ ರಚನೆಯಾಗಿಲ್ಲದಿರುವುದು ಹಾಗೂ
ಪರಿಣಾಮಕಾರಿಯಾಗಿ ಕೆಲಸಮಾಡದಿರುವುದು ದುರದೃಷ್ಟಕರ.
ಮಕ್ಕಳ ಹಕ್ಕುಗಳ ಗ್ರಾಮ ಸಭೆ
ದೇಶದಲ್ಲೇ
ಮೊದಲ ಬಾರಿಗೆ 2006 ರಿಂದ ನಮ್ಮ ರಾಜ್ಯದಲ್ಲಿ ಮಕ್ಕಳ ಭಾಗವಹಿಸುವ ಹಕ್ಕನ್ನು ಖಾತ್ರಿಪಡಿಸಿಕೊಳ್ಳುವ ಹಾಗೂ
ಮಕ್ಕಳಿಗೆ ತಮ್ಮ ಕಾಳಜಿಗಳನ್ನು ವ್ಯಕ್ತಪಡಿಸಲು ಮತ್ತು ಸ್ಥಳೀಯ ಆಡಳಿತದಲ್ಲಿ ಭಾಗವಹಿಸಲು ಅಧಿಕಾರ
ನೀಡುವ ಉದ್ದೆಶದಿಂದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಕನಿಷ್ಠ ವರ್ಷಕ್ಕೆ ಒಂದು ಬಾರಿಯಾದರೂ
(ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ) ನಡೆಸುವ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದು ಮಕ್ಕಳು
ತಮ್ಮ ಜೀವನದ ಮೇಲೆ ಪರಿಣಾಮ ಬೀರುವ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆಯಂತಹ ಸಮಸ್ಯೆಗಳ ಬಗ್ಗೆ ನೇರವಾಗಿ ಗ್ರಾಮ ಪಂಚಾಯತ್ ಜೊತೆಗೆ ಸಂವಾದ
ನಡೆಸಲು ಪ್ರೋತ್ಸಾಹಿಸುತ್ತದೆ. ಈ ಚರ್ಚೆಗಳಲ್ಲಿ ಮಕ್ಕಳನ್ನು ಸೇರಿಸಿಕೊಳ್ಳುವ ಮೂಲಕ, ಸ್ಥಳಿಯಾಡಳಿತವನ್ನು ಹೆಚ್ಚು ಒಳಗೊಳ್ಳುವ ಮತ್ತು ಸ್ಪಂದಿಸುವ ಗುರಿಯನ್ನು ಹೊಂದಿದೆ. ಅದೇನೇ
ಇದ್ದರೂ,
ಈ ಸಭೆಗಳಲ್ಲಿ ಮಕ್ಕಳನ್ನು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವಲ್ಲಿ, ಸಭೆಯ ನಂತರದ ಫಲಿತಗಳನ್ನು, ಕ್ರಿಯಾಯೋಜನೆಗಳನ್ನು
ಅನುಸರಣೆ ಮಾಡುವಲ್ಲಿ ಮತ್ತು ಮೇಲ್ವಿಚಾರಣೆ ನಡೆಸುವಲ್ಲಿ ಸಾಕಷ್ಟು ಸವಾಲುಗಳಿವೆ.
ಮಕ್ಕಳ ಅಂಕಿಅಂಶಗಳ ಸಂಗ್ರಹ
ನಿಜಕ್ಕೂ
ಮಕ್ಕಳಿಗೆ ಗ್ರಾಮಾಡಳಿತ ರಚನಾತ್ಮಕವಾಗಿ ಸ್ಪಂದಿಸಬೇಕಾದರೆ ತಮ್ಮ ವ್ಯಾಪ್ತಿಯ ಮಕ್ಕಳ ನಿಖರವಾದ
ಅಂಕಿಅAಶಗಳನ್ನು ಸಂಗ್ರಹಿಸಿ ವಿಶ್ಲೇಷಣೆ ನಡೆಸುವುದು ಅತಿಮುಖ್ಯ. ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಯ ನಿಖರವಾದ ಡೇಟಾ ಸಂಗ್ರಹಣೆಯು ಗ್ರಾಮ ಪಂಚಾಯ್ತಿ
ಮಕ್ಕಳ ವಿಕಾಸ ಹಾಗೂ ರಕ್ಷಣೆಗೆ ಪೂರಕವಾದ ಕ್ರಿಯಾಯೋಜನೆ ರೂಪಿಸಿಕೊಳ್ಳಲು ಮತ್ತು ಅನುದಾನ
ನಿಗದಿಗೊಳಿಸಲು ಸಹಾಯಮಾಡುತ್ತದೆ. ಈ ಬಗ್ಗೆ ೪ ಪುಟಗಳ ನಮೂನೆ ನೀಡಿ ಸದರಿ ನಮೂನೆಯಲ್ಲಿ ಮಕ್ಕಳ
ಅಂಕಿಅAಶಗಳನ್ನು ಸಂಗ್ರಹಿಸಿ, ವಿಶ್ಲೇಷಣೆ ಮಾಡಿ ಅದಕ್ಕೆ
ಪೂರಕವಾಗಿ ಕ್ರಿಯಾಯೋಜನೆ ರೂಪಿಸಿಕೊಳ್ಳುವಂತೆ ಸುತ್ತೋಲೆ ನೀಡಿ ಹಲವು ವರ್ಷ ಕಳೆದಿದ್ದರೂ ಗ್ರಾಮ
ಪಂಚಾಯ್ತಿಗಳಲ್ಲಿ ಇದಕ್ಕೆ ಪೂರಕವಾದ ದಾಖಲೆಗಳಿಲ್ಲದಿರುವುದು ವಿಪರ್ಯಾಸ.
ಗ್ರಾಮ
ಪಂಚಾಯ್ತಿ ಮಟ್ಟದ ಶಿಕ್ಷಣ ಕಾರ್ಯಪಡೆ- “ಡ್ರಾಪ್-ಔಟ್” ಮಕ್ಕಳನ್ನು ಶಾಲೆಗೆ ಕರೆತರುವುದು
ಗ್ರಾಮೀಣ
ಪ್ರದೇಶಗಳಲ್ಲಿ ಶಾಲೆ ಬಿಡುವವರ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು
ಮರಳಿ ಶಾಲೆಗೆ ಕರೆತರುವ ಅಭಿಯಾನವನ್ನು ಸರ್ಕಾರ ಆರಂಭಿಸಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ
ಯಾವೊಂದು ಮಗುವು ಕೂಡ ಶಿಕ್ಷಣದಿಂದ ವಂಚಿತವಾಗಬಾರದು, ಈ ಮಹತ್ವದ ಕೆಲಸದಲ್ಲಿ ಶಿಕ್ಷಣ ಇಲಾಖೆಯ ಜೊತೆಗೆ ಗ್ರಾಮ ಪಂಚಾಯ್ತಿ ಕೂಡ ಕೈಜೋಡಿಸಬೇಕಿದೆ.
ಸಮುದಾಯ ಜಾಗೃತಿ ಕಾರ್ಯಕ್ರಮಗಳು, ಮನೆ-ಮನೆ ಸಮೀಕ್ಷೆಗಳು
ಮತ್ತು ಕುಟುಂಬಗಳಿಗೆ ಪ್ರೋತ್ಸಾಹದಂತಹ ಪ್ರಯತ್ನಗಳು ಈ ಗುರಿ ಸಾಧಿಸಲು ಸಹಾಯಮಾಡುತ್ತವೆ.
ಪ್ರತಿ ಮಗುವೂ
ಶಿಕ್ಷಣವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಅವರ ಅಭಿವೃದ್ಧಿ ಮತ್ತು ಸಮುದಾಯದ
ಪ್ರಗತಿಗೆ ಮೂಲಭೂತವಾಗಿದೆ. ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸುವುದನ್ನು ತಡೆಯುವ ಸಾಮಾಜಿಕ
ಮತ್ತು ಆರ್ಥಿಕ ಅಡೆತಡೆಗಳನ್ನು ನಿವಾರಿಸುವುದು ಸ್ಥಳಿಯಾಡಳಿತದ ಮೊದಲ ಆದ್ಯತೆಯಾಗಬೇಕು. ಈ
ಹಿನ್ನೆಲೆಯಲ್ಲಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಶೈಕ್ಷಣಿಕ ಪ್ರಗತಿಗೆ ತೊಡಗಿಸಿಕೊಳ್ಳಲು ಹಾಗೂ
ನಿರಂತರ ಮೇಲುಸ್ತುವಾರಿ ಮಾಡಲು ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯ್ತಿಗಳಲ್ಲೂ ‘ಗ್ರಾಮ
ಪಂಚಾಯ್ತಿ ಮಟ್ಟದ ಶಿಕ್ಷಣ ಕಾರ್ಯಪಡೆ’ ರಚಿಸುವುದು ಕಡ್ಡಾಯವಾಗಿದೆ.
ಗ್ರಾಮೀಣ ಗ್ರಂಥಾಲಯಗಳ ಸಬಲೀಕರಣ- ಓದುವ ಬೆಳಕು ಕಾರ್ಯಕ್ರಮ.
ಗ್ರಾಮೀಣ
ಗ್ರಂಥಾಲಯಗಳು ಕಲಿಕೆಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಮತ್ತು ಮಕ್ಕಳಿಗೆ ಶೈಕ್ಷಣಿಕ ಸಂಪನ್ಮೂಲಗಳ
ಪ್ರವೇಶವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದನ್ನು ಮನಗಂಡು ಪಂಚಾಯತ್
ರಾಜ್ ಇಲಾಖೆ ‘ಓದುವ ಬೆಳಕು” ಕಾರ್ಯಕ್ರಮದ ಮೂಲಕ ಗ್ರಾಮೀಣ ಗ್ರಂಥಾಲಯಗಳ ಸಬಲೀಕರಣಕ್ಕೆ ಮಹತ್ವದ
ಕಾಯಕಲ್ಪನೀಡಿದೆ.
ಈ
ಕಾರ್ಯಕ್ರಮದ ಮೂಲಕ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಮಕ್ಕಳಿಗೆ ಉಚಿತವಾದ ಸದಸ್ಯತ್ವ ನೀಡುವುದು, ಗ್ರಂಥಾಲಯದ ಸೌಲಭ್ಯಗಳನ್ನು
ಉನ್ನತೀಕರಿಸುವುದು, ಪುಸ್ತಕಗಳೊಂದಿಗೆ, ಡಿಜಿಟಲೀಕರಣಕ್ಕೆ ಆದ್ಯತೆ ನೀಡುವುದು ಮತ್ತು ಮಕ್ಕಳಲ್ಲಿ ಓದುವ ಹವ್ಯಾಸವನ್ನು
ಉತ್ತೇಜಿಸುವುದಕ್ಕೆ ಕಾರ್ಯಚಟುವಟಿಕೆ ರೂಪಿಸಲಾಗಿದೆ. ಸದರಿ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತ
ಅಭೂತಪೂರ್ವ ಯಶಸ್ಸು ಸಿಕ್ಕಿರುವುದು ಆಶಾದಾಯಕ ಬೆಳವಣಿಗೆ.
ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ
ಮೇಲೆ
ವಿವರಿಸಲಾದ ಈ ಎಲ್ಲಾ ಮಕ್ಕಳ ಕೇಂದ್ರಿತ ಮತ್ತು ಮಕ್ಕಳ ಪರವಾದ ಉಪಕ್ರಮಗಳನ್ನು ವ್ಯವಸ್ಥಿತವಾಗಿ
ಅನುಷ್ಟಾನಗೊಳಿಸುವುದಲ್ಲದೆ, ಮಕ್ಕಳು, ಪೋಷಕರು, ಶಾಲೆ, ಅಂಗನವಾಡಿ, ಮಕ್ಕಳ ಕುರಿತ ಕೆಲಸ ಮಾಡುವ ಸಂಘಸAಸ್ಥೆಗಳು, ಜನಪ್ರತಿನಿಧಿಗಳು ಹೀಗೆ ಎಲ್ಲಾ ಭಾಗೀದಾರರನ್ನು
ಒಳಗೊಂಡು ಕೆಲಸ ಮಾಡಿದಾಗ ನಮ್ಮ ಗ್ರಾಮ ಪಂಚಾಯ್ತಿಗಳು ಮಕ್ಕಳ ಸ್ನೇಹಿಯಾಗಲಿವೆ. ಇದಕ್ಕಾಗಿ
ಪಂಚಾಯತ್ ರಾಜ್ ಇಲಾಖೆ ನವೆಂಬರ್ ೧೪ ರಿಂದ ಜನೆವರಿ ೨೪ನೇ ತಾರೀಖಿನವರೆಗಿನ ೧೦ ವಾರಗಳನ್ನು
ಪ್ರತೀವರ್ಷ ಮಕ್ಕಳ ಸ್ನೇಹಿ ಗ್ರಾಮ ಪಂಚಾಯ್ತಿ ಅಭಿಯಾನವೆಂದು ಆಯೋಜಿಸುತ್ತದೆ.
ಈ ಅಭಿಯಾನದ
ಭಾಗವಾಗಿ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿಯನ್ನು
ತಡೆಯುವಲ್ಲಿ, ಎಲ್ಲಾ ಮಕ್ಕಳಿಗೆ ಜನನ ಪ್ರಮಾಣ ಪತ್ರ, ಜನನದ ನಂತರ ಶೇ ೧೦೦ ರಷ್ಟು ಚುಚ್ಚುಮದ್ದುಗಳು ಸಕಾಲದಲ್ಲಿ ದೊರಕಿರುವುದನ್ನು
ಖಚಿತಪಡಿಸಿಕೊಳ್ಳುವಲ್ಲಿ, ಎಲ್ಲಾ ಶಾಲೆಗಳ
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಹಾಗೂ ಅಂಗನವಾಡಿಗಳಲ್ಲಿರುವ ಬಾಲವಿಕಾಸ
ಸಮಿತಿಗಳು ರಚನಾತ್ಮಕವಾಗಿ ಕೆಲಸಮಾಡುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವಲ್ಲಿ, ಜೀತಪದ್ದತಿಯಂತಹ ಸಾಮಾಜಿಕ ಕಳಂಕವನ್ನು ತೊಡೆದು ಸಮುದಾಯದಲ್ಲಿ ಅರಿವಿನ ಬೀಜಬಿತ್ತುವಲ್ಲಿ, ವಿಶೇಷ ಚೇತನ ಮಕ್ಕಳಿಗೆ ಆದ್ಯತೆ ನೀಡುವಲ್ಲಿ, ಕ್ರೀಡೆ ಮತ್ತು ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು
ಆಯೋಜಿಸುವ ಮೂಲಕ ಮಕ್ಕಳ ಮನೋವಿಕಾಸಕ್ಕೆ ತೊಡಗಿಸಿಕೊಳ್ಳುವ ಕೆಲಸ ಮಾಡಬೇಕಿದೆ.
ಮಕ್ಕಳ
ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನವು ಮಕ್ಕಳ ಸ್ನೇಹಿ ಮೂಲಸೌಕರ್ಯವನ್ನು ರೂಪಿಸುವುದು, ಆಡಳಿತದಲ್ಲಿ ಮಕ್ಕಳ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಮತ್ತು ಅವರ ಹಕ್ಕುಗಳನ್ನು
ರಕ್ಷಿಸುವುದನ್ನು ಮತ್ತು ಅದನ್ನು ಖಾತ್ರಿಪಡಿಸುವುದನ್ನು ಒಳಗೊಂಡಿರುತ್ತದೆ. ತಳಮಟ್ಟದಲ್ಲಿ ಈ
ಅಭಿಯಾನದ ಅನುಷ್ಠಾನವು ಮಕ್ಕಳಸ್ನೇಹಿ ಗ್ರಾಮ ಪಂಚಾಯ್ತಿಗಳನ್ನಾಗಿ ರೂಪಿಸುವಲ್ಲಿ
ನಿರ್ಣಾಯಕವಾಗಿದೆ.
ಗ್ರಾಮ
ಪಂಚಾಯಿತಿಗಳನ್ನು ಮಕ್ಕಳ ಸ್ನೇಹಿಯನ್ನಾಗಿ ಮಾಡುವ ಕರ್ನಾಟಕದ ಸರ್ಕಾರದ ಈ ಎಲ್ಲಾ ಉಪಕ್ರಮಗಳು
ಗ್ರಾಮೀಣ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಅಪಾರ ಭರವಸೆಯನ್ನು ಹೊಂದಿವೆ. ಆದಾಗ್ಯೂ, ಈ ಕಾರ್ಯಕ್ರಮಗಳ ಯಶಸ್ಸು ತಳಮಟ್ಟದಲ್ಲಿ ಅವುಗಳ ಪರಿಣಾಮಕಾರಿ ಅನುಷ್ಠಾನದ ಮೇಲೆ
ಅವಲಂಬಿತವಾಗಿದೆ. ಇದನ್ನು ಸಾಧಿಸಲು ಎಲ್ಲಾ ಭಾಗೀದಾರರಿಗೆ ಹೆಚ್ಚಿನ ಅರಿವು, ಸಮುದಾಯದ ಸಕ್ರಿಯ ಭಾಗವಹಿಸುವಿಕೆ, ನಿರಂತರ ಮೇಲ್ವಿಚಾರಣೆ
ಮತ್ತು ದೃಢವಾದ ಅನುಸರಣಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಕರ್ನಾಟಕವು ಈ ಸವಾಲುಗಳನ್ನು
ಜಯಿಸಲು ಸಾಧ್ಯವಾದರೆ, ನಮ್ಮ ರಾಜ್ಯದ ಮಕ್ಕಳ
ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾಗುವುದಲ್ಲದೆೆ, ಇತರ ರಾಜ್ಯಗಳಿಗೆ ಮಾದರಿಯಾಗಲಿದೆ.

Comments
Post a Comment