ದೀಪಾವಳಿ ಹಬ್ಬದಲ್ಲಿ ಮಕ್ಕಳ ಬಗ್ಗೆ ಎಚ್ಚರವಿರಲಿ: ಡಾ.ತಿಪ್ಪೇಸ್ವಾಮಿ ಕೆ.ಟಿ.
ಪ್ರತಿಯೊಬ್ಬರ ಬದುಕಿನಲ್ಲಿ ಅಂಧಕಾರವಳಿದು ಬೆಳಕು ತರಲೆಂಬ ಆಶಯದೊಂದಿಗೆ ಆಚರಿಸುವ ದೀಪಾವಳಿ ಹಬ್ಬವು ಪ್ರತೀ ವರ್ಷ ನೂರಾರು ಮಕ್ಕಳ ಜೀವನದಲ್ಲಿ ಕತ್ತಲೆಯನ್ನುಂಟು ಮಾಡುವುದು ದುರ್ದೈವ. ಪಟಾಕಿ ಸಿಡಿಸುವ ಉತ್ಸಾಹದಲ್ಲಿ ಮಕ್ಕಳ ಕಣ್ಣಿಗೆ ಹಾನಿಯಾಗಿರುವ ಹಲವಾರು ಪ್ರಕರಣಗಳು ಪ್ರತೀ ವರ್ಷ ದಾಖಲಾಗುತ್ತವೆ. ಹಾಗಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ ಮನವಿ ಮಾಡಿದ್ದಾರೆ.

Comments
Post a Comment